ಇತ್ತೀಚಿನ ದಿನಗಳಲ್ಲಿ “ಹೊಸ ರೇಷನ್ ಕಾರ್ಡ್‌ಗೆ (New ration card) ಅರ್ಜಿ ಆರಂಭವಾಗಿದೆ” ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಆದರೆ ಈ ಮಾಹಿತಿ ಸತ್ಯವಲ್ಲ. ಈ ರೀತಿಯ ಪೋಸ್ಟ್‌ಗಳು ಮತ್ತು ವಿಡಿಯೋಗಳನ್ನು ನಂಬಿ ಸಾರ್ವಜನಿಕರು ಅನಗತ್ಯವಾಗಿ ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ಆಹಾರ ಇಲಾಖೆಯ ಕಚೇರಿಗಳಿಗೆ ಭೇಟಿ ನೀಡುತ್ತಿದ್ದಾರೆ.
ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಆರಂಭವಾಗಿದೆಯೇ?
ಇಲ್ಲ. ಪ್ರಸ್ತುತ ಕರ್ನಾಟಕ ಸರ್ಕಾರವು ಸಾಮಾನ್ಯ ಸಾರ್ವಜನಿಕರಿಗೆ ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಆಹ್ವಾನಿಸಿಲ್ಲ.
ಈಗ ಯಾರಿಗೆ ಮಾತ್ರ ಅವಕಾಶವಿದೆ?
ಪ್ರಸ್ತುತ ಸಾಮಾನ್ಯ ಹೊಸ ರೇಷನ್ ಕಾರ್ಡ್ ಅರ್ಜಿಗಳನ್ನು ಸ್ವೀಕರಿಸುತ್ತಿಲ್ಲ. ಆದರೆ ಸರ್ಕಾರದ ಮಾರ್ಗಸೂಚಿಯಂತೆ ಕೆಲವು ವಿಶೇಷ ಸಂದರ್ಭಗಳಲ್ಲಿ ಆಯ್ದ ಅರ್ಹ ಫಲಾನುಭವಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅವುಗಳಲ್ಲಿ:
- ಈ-ಶ್ರಮ (e-Shram) ಕಾರ್ಡ್ ಹೊಂದಿರುವ ಆಯ್ದ ಅರ್ಹ ಫಲಾನುಭವಿಗಳು (ಎಲ್ಲ ಈ-ಶ್ರಮ ಕಾರ್ಡ್ ಹೊಂದಿರುವವರಿಗೆ ಅಲ್ಲ)
- PVTG (Particularly Vulnerable Tribal Groups) ಸಮುದಾಯದ ಅರ್ಹ ಸದಸ್ಯರು
- ತುರ್ತು ವೈದ್ಯಕೀಯ ಅಗತ್ಯತೆ ಇರುವ ಅರ್ಹ ಫಲಾನುಭವಿಗಳು
ಈ ವರ್ಗಗಳಲ್ಲಿರುವ ಪ್ರತಿಯೊಬ್ಬರಿಗೂ ಅವಕಾಶ ಇರುವುದಿಲ್ಲ. ಸರ್ಕಾರದ ಮಾನದಂಡಗಳನ್ನು ಪೂರೈಸುವ ಆಯ್ದ ಅರ್ಹರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ.
ಸುಳ್ಳು ಸುದ್ದಿಗಳಿಗೆ ಎಚ್ಚರ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ “ಇಂದೇ ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿ” ಎಂಬ ಪೋಸ್ಟ್‌ಗಳು ಅಥವಾ ವಿಡಿಯೋಗಳನ್ನು ನಂಬಬೇಡಿ. ಸರ್ಕಾರದಿಂದ ಅಧಿಕೃತ ಪ್ರಕಟಣೆ ಹೊರಬಂದ ನಂತರವೇ ಸಾಮಾನ್ಯ ಸಾರ್ವಜನಿಕರಿಗೆ ಅರ್ಜಿ ಸಲ್ಲಿಸಲು ಅವಕಾಶ ದೊರೆಯುತ್ತದೆ.
ಯಾರಾದರೂ ಹಣ ಪಡೆದು ಹೊಸ ರೇಷನ್ ಕಾರ್ಡ್ ಮಾಡಿಕೊಡುತ್ತೇವೆ ಎಂದು ಹೇಳಿದರೆ ಅಂತಹವರಿಂದ ದೂರವಿರಿ. ಅಧಿಕೃತ ಪ್ರಕಟಣೆ ಹೊರಬರುವವರೆಗೆ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಸಾಮಾನ್ಯ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.
ಅಧಿಕೃತ ಮಾಹಿತಿ ಎಲ್ಲಿಂದ?
ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಆರಂಭವಾದ ತಕ್ಷಣ ಅದರ ಬಗ್ಗೆ ಅಧಿಕೃತ ಮಾಹಿತಿ, ಅರ್ಜಿ ಸಲ್ಲಿಸುವ ವಿಧಾನ, ಅಗತ್ಯ ದಾಖಲೆಗಳು ಹಾಗೂ ಕೊನೆಯ ದಿನಾಂಕದ ವಿವರಗಳನ್ನು ನಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ.
ಈ ಪುಟದ ಕೊನೆಯಲ್ಲಿ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಪ್‌ಡೇಟ್‌ಗಳನ್ನು ಪರಿಶೀಲಿಸಿ. ವದಂತಿಗಳನ್ನು ನಂಬುವ ಬದಲು ಅಧಿಕೃತ ಮಾಹಿತಿಯನ್ನೇ ಅನುಸರಿಸಿ.






