NICL ನಲ್ಲಿ 500 ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿ: ಕರ್ನಾಟಕಕ್ಕೆ 30 ಅವಕಾಶಗಳು

ಸರ್ಕಾರಿ ಸ್ವಾಮ್ಯದ ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ (NICL) 2026-27 ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಕ್ಲಾಸ್-III ಅಸಿಸ್ಟೆಂಟ್ ಹುದ್ದೆಗಳಿಗೆ ದೇಶದಾದ್ಯಂತ ಒಟ್ಟು 500 ಹುದ್ದೆಗಳು ಲಭ್ಯವಿದ್ದು, ಕರ್ನಾಟಕದಲ್ಲಿ ಕನ್ನಡ ಭಾಷಾ ಪ್ರಾವೀಣ್ಯ ಹೊಂದಿರುವ ಅಭ್ಯರ್ಥಿಗಳಿಗೆ 30 ಹುದ್ದೆಗಳಿವೆ.

ಪ್ರಮುಖ ದಿನಾಂಕಗಳು

  • ಆನ್‌ಲೈನ್ ಅರ್ಜಿ ಆರಂಭ: 18 ಜುಲೈ 2026
  • ಅರ್ಜಿ ಸಲ್ಲಿಸಲು ಕೊನೆಯ ದಿನ: 7 ಆಗಸ್ಟ್ 2026
  • ಶುಲ್ಕ ಪಾವತಿಸುವ ಅವಧಿ: 18 ಜುಲೈ ರಿಂದ 7 ಆಗಸ್ಟ್ 2026
  • ಪೂರ್ವಭಾವಿ ಆನ್‌ಲೈನ್ ಪರೀಕ್ಷೆ: 27 ಆಗಸ್ಟ್ 2026
  • ಮುಖ್ಯ ಆನ್‌ಲೈನ್ ಪರೀಕ್ಷೆ: 30 ಅಕ್ಟೋಬರ್ 2026

ಕರ್ನಾಟಕದ ಹುದ್ದೆಗಳ ವಿವರ

ಕರ್ನಾಟಕಕ್ಕೆ ಒಟ್ಟು 30 ಹುದ್ದೆಗಳು ಪ್ರಕಟವಾಗಿವೆ. ವರ್ಗವಾರು ಸಾಮಾನ್ಯ ಹುದ್ದೆಗಳು: SC–5, ST–2, OBC–8, EWS–3 ಮತ್ತು UR–12. PwBD ಹಾಗೂ ಮಾಜಿ ಸೈನಿಕರಿಗೆ ಮೀಸಲಾತಿಯೂ ಅನ್ವಯಿಸುತ್ತದೆ. ಹುದ್ದೆಗಳ ಸಂಖ್ಯೆ ತಾತ್ಕಾಲಿಕವಾಗಿದ್ದು ಕಂಪನಿಯ ಅಗತ್ಯಕ್ಕೆ ಅನುಗುಣವಾಗಿ ಬದಲಾಗಬಹುದು.

ಅರ್ಹತೆ

ಅಭ್ಯರ್ಥಿಗಳು 1 ಜುಲೈ 2026ರಂತೆ 21 ರಿಂದ 30 ವರ್ಷ ವಯಸ್ಸಿನವರಾಗಿರಬೇಕು. 2 ಜುಲೈ 1996 ರಿಂದ 1 ಜುಲೈ 2005ರ ನಡುವೆ ಜನಿಸಿದವರು ಅರ್ಹರು. SC/ST ಅಭ್ಯರ್ಥಿಗಳಿಗೆ 5 ವರ್ಷ, OBC (ನಾನ್-ಕ್ರೀಮಿ ಲೇಯರ್) ಅಭ್ಯರ್ಥಿಗಳಿಗೆ 3 ವರ್ಷ ಸೇರಿ ನಿಯಮಾನುಸಾರ ವಯೋಸಡಿಲಿಕೆ ಲಭ್ಯ.

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಹೊಂದಿರಬೇಕು. ಕರ್ನಾಟಕದ ಹುದ್ದೆಗೆ ಅರ್ಜಿ ಸಲ್ಲಿಸುವವರು ಕನ್ನಡವನ್ನು ಓದಲು, ಬರೆಯಲು ಮತ್ತು ಮಾತನಾಡಲು ಬಲ್ಲವರಾಗಿರಬೇಕು. ಅಂತಿಮ ಆಯ್ಕೆಗೆ ಮುನ್ನ ಪ್ರಾದೇಶಿಕ ಭಾಷಾ ಪರೀಕ್ಷೆ ನಡೆಯಲಿದೆ.

ವೇತನ ಮತ್ತು ಸೌಲಭ್ಯಗಳು

ಆರಂಭಿಕ ವೇತನ ಶ್ರೇಣಿ ₹36,290ರಿಂದ ಆರಂಭವಾಗುತ್ತದೆ. ಮೆಟ್ರೋ ನಗರದಲ್ಲಿ ಪ್ರಾರಂಭಿಕ ಹಂತದ ಒಟ್ಟು ಮಾಸಿಕ ವೇತನ ಅಂದಾಜು ₹53,000 ಇರಲಿದೆ. ವೈದ್ಯಕೀಯ ಸೌಲಭ್ಯ, ಗ್ರೂಪ್ ಮೆಡಿಕ್ಲೇಮ್, ರಜೆ ಪ್ರಯಾಣ ಸಬ್ಸಿಡಿ ಮತ್ತು ಇತರೆ ಸಿಬ್ಬಂದಿ ಕಲ್ಯಾಣ ಸೌಲಭ್ಯಗಳೂ ನಿಯಮಾನುಸಾರ ಲಭ್ಯ.

ಆಯ್ಕೆ ಪ್ರಕ್ರಿಯೆ

ಆಯ್ಕೆ ಪ್ರಕ್ರಿಯೆಯಲ್ಲಿ ಮೂರು ಹಂತಗಳಿವೆ:

  1. ಪೂರ್ವಭಾವಿ ಪರೀಕ್ಷೆ: ಇಂಗ್ಲಿಷ್, ರೀಸನಿಂಗ್ ಮತ್ತು ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ವಿಷಯಗಳಲ್ಲಿ 100 ಅಂಕಗಳ ಪರೀಕ್ಷೆ.
  2. ಮುಖ್ಯ ಪರೀಕ್ಷೆ: ರೀಸನಿಂಗ್, ಇಂಗ್ಲಿಷ್, ಸಂಖ್ಯಾತ್ಮಕ ಸಾಮರ್ಥ್ಯ, ಸಾಮಾನ್ಯ ಜ್ಞಾನ ಮತ್ತು ಕಂಪ್ಯೂಟರ್ ಜ್ಞಾನ ವಿಷಯಗಳಲ್ಲಿ 200 ಅಂಕಗಳ ಪರೀಕ್ಷೆ.
  3. ಪ್ರಾದೇಶಿಕ ಭಾಷಾ ಪರೀಕ್ಷೆ: ಕನ್ನಡ ಪ್ರಾವೀಣ್ಯ ಪರೀಕ್ಷೆ; ಇದು ಅರ್ಹತಾ ಸ್ವರೂಪದ್ದಾಗಿದೆ.

ಪ್ರತಿ ತಪ್ಪು ಉತ್ತರಕ್ಕೆ ಆ ಪ್ರಶ್ನೆಯ ಅಂಕದ ನಾಲ್ಕನೇ ಒಂದು ಭಾಗದಷ್ಟು ಋಣಾತ್ಮಕ ಅಂಕ ಇರುತ್ತದೆ.

ಅರ್ಜಿ ಶುಲ್ಕ

SC/ST/PwBD/ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕವಿಲ್ಲ. ಇತರೆ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ₹850. ಅಭ್ಯರ್ಥಿಗಳು ಒಂದು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಕ್ಕೆ ಮಾತ್ರ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು NICL ಅಧಿಕೃತ ನೇಮಕಾತಿ ವೆಬ್‌ಸೈಟ್ಗೆ ಭೇಟಿ ನೀಡಿ. ಕೊನೆಯ ದಿನದ ತಾಂತ್ರಿಕ ತೊಂದರೆ ತಪ್ಪಿಸಲು ಅರ್ಹ ಅಭ್ಯರ್ಥಿಗಳು ಮುಂಚಿತವಾಗಿಯೇ ಅರ್ಜಿ ಸಲ್ಲಿಸುವುದು ಉತ್ತಮ.

ನೇಮಕಾತಿ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಆನ್ಲೈನ್‌ ಅರ್ಜಿ ಸಲ್ಲಿಸಲು ಈ ಲಿಂಕ್‌ ಕ್ಲಿಕ್‌ ಮಾಡಿ.

Leave a Reply

Your email address will not be published. Required fields are marked *

🔔 Subscribe to Latest Updates🟢 Join our WhatsApp Channel🔵 Join our Telegram Channel