ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್‌ನಲ್ಲಿ 40 ಹುದ್ದೆಗಳ ನೇಮಕಾತಿ; ಅರ್ಜಿ ಆಹ್ವಾನ

ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್‌ನಲ್ಲಿ 40 ಹುದ್ದೆಗಳ ನೇಮಕಾತಿ: ಪದವೀಧರರು ಹಾಗೂ ಎಸ್‌ಎಸ್‌ಎಲ್‌ಸಿ ಅಭ್ಯರ್ಥಿಗಳಿಗೆ ಅವಕಾಶ

ಶಿರಸಿ, ಜುಲೈ 11: ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶ ಒದಗಿಸಿದ್ದು, ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ಲಿಮಿಟೆಡ್ ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 40 ಹುದ್ದೆಗಳ ನೇಮಕಾತಿ ನಡೆಯಲಿದ್ದು, ಅರ್ಹ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬಹುದು.‌

ಖಾಲಿ ಇರುವ ಹುದ್ದೆಗಳು

  • ಫ್ರಂಟ್ ಡೆಸ್ಕ್ ಅಸೋಸಿಯೇಟ್ / ಕಸ್ಟಮರ್ ರಿಲೇಶನ್‌ಶಿಪ್ ಅಸೋಸಿಯೇಟ್30 ಹುದ್ದೆಗಳು
  • ಅಟೆಂಡರ್ / ಪಿಯಾನ್ / ಸೆಕ್ಯೂರಿಟಿ ಗಾರ್ಡ್10 ಹುದ್ದೆಗಳು

ವಿದ್ಯಾರ್ಹತೆ

ಫ್ರಂಟ್ ಡೆಸ್ಕ್ / ಕಸ್ಟಮರ್ ರಿಲೇಶನ್‌ಶಿಪ್ ಅಸೋಸಿಯೇಟ್:

  • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ B.Com, BBA, BBM, BE, BCA, B.Sc ಅಥವಾ BA ಪದವಿ.
  • ಪದವಿಯಲ್ಲಿ ಕನಿಷ್ಠ 50% ಅಂಕಗಳು ಕಡ್ಡಾಯ.
  • MBA, M.Com, MCA ಸೇರಿದಂತೆ ಉನ್ನತ ವಿದ್ಯಾರ್ಹತೆ ಹೊಂದಿದವರಿಗೆ ಆದ್ಯತೆ.

ಅಟೆಂಡರ್ / ಪಿಯಾನ್ / ಸೆಕ್ಯೂರಿಟಿ ಗಾರ್ಡ್:

  • ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರಬೇಕು.

₹ 30,000/- ಒಳಗಿನ ಬೆಸ್ಟ್‌ ಲ್ಯಾಪ್‌ಟಾಪ್‌ಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ವೇತನ

  • ಫ್ರಂಟ್ ಡೆಸ್ಕ್ / CRA: ₹34,100 ರಿಂದ ₹1,07,500 ವರೆಗೆ.
  • ಅಟೆಂಡರ್ / ಪಿಯಾನ್ / ಸೆಕ್ಯೂರಿಟಿ ಗಾರ್ಡ್: ₹27,000 ರಿಂದ ₹83,700 ವರೆಗೆ.

ವಯೋಮಿತಿ

  • ಕನಿಷ್ಠ ವಯಸ್ಸು: 18 ವರ್ಷ
  • ಸಾಮಾನ್ಯ ವರ್ಗ: 40 ವರ್ಷ
  • OBC (2A, 2B, 3A, 3B): 43 ವರ್ಷ
  • SC/ST ಹಾಗೂ ಪ್ರವರ್ಗ-1: 45 ವರ್ಷ

ಆಯ್ಕೆ ಪ್ರಕ್ರಿಯೆ

ಅಭ್ಯರ್ಥಿಗಳ ಆಯ್ಕೆ ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ನಡೆಯಲಿದೆ.

  • ಫ್ರಂಟ್ ಡೆಸ್ಕ್ ಹುದ್ದೆಗೆ 200 ಅಂಕಗಳ ಬಹು ಆಯ್ಕೆ ಪ್ರಶ್ನೆಗಳ (Objective) ಪರೀಕ್ಷೆ.
  • ಅಟೆಂಡರ್ ಹುದ್ದೆಗೆ 100 ಅಂಕಗಳ ಬಹು ಆಯ್ಕೆ ಪ್ರಶ್ನೆಗಳ ಪರೀಕ್ಷೆ.

ಅರ್ಜಿ ಶುಲ್ಕ

ಎಲ್ಲಾ ಹುದ್ದೆಗಳಿಗೂ ₹1,000 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ

ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಅಂಚೆ ಮೂಲಕ ಕಳುಹಿಸಬೇಕು.

ಕೊನೆಯ ದಿನಾಂಕ: 28 ಜುಲೈ 2026, ಸಂಜೆ 5:00 ಗಂಟೆ.

ಹೆಚ್ಚಿನ ಮಾಹಿತಿಗಾಗಿ: ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ಪ್ರಕಟಿಸಿರುವ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಪರಿಶೀಲಿಸಿ. ನೇಮಕಾತಿ ಅಧಿಸೂಚನೆ ಹಾಗೂ ಅರ್ಜಿ ಫಾರಂಗಳಿಗಾಗಿ ಈ ಕೆಳಗಿನ ಲಿಂಕ್‌ ಗಳನ್ನು ಕ್ಲಿಕ್‌ ಮಾಡಿ.

ನೇಮಕಾತಿ ಅಧಿಸೂಚನೆ

ಅರ್ಜಿ ಫಾರ್ಮ್

Leave a Comment

Your email address will not be published. Required fields are marked *

Scroll to Top